ಲಾಸ್ಟ್ ಬಸ್ ೨೦೧೬ ರ , ಎಸ್ ಡಿ ಅರವಿಂದ್ ಬರೆದು ಸಹ ನಿರ್ಮಿಸಿ ಮತ್ತು ಸಂಗೀತ ನೀಡಿರುವ ಕನ್ನಡದ ಮನೋವೈಜ್ಞಾನಿಕ ಥ್ರಿಲ್ಲರ್ - ಹಾರರ್ ಚಿತ್ರ. ಚಿತ್ರದ ಮುಖ್ಯ ಪಾತ್ರಗಳಲ್ಲಿ ಅವಿನಾಶ್ ನರಸಿಂಹರಾಜು, ಮೇಘಶ್ರಿ ಭಾಗವತರ್, ಮಾನಸ ಜೋಶಿ ಮತ್ತು ಸಮರ್ಥ್ ನರಸಿಂಹರಾಜು ನಟಿಸಿದ್ದಾರೆ. ಚಿತ್ರದ " ದೂರಿ ದೂರಿ" ಹಾಡು ಬಿಬಿಸಿ ಏಷ್ಯನ್ ನೆಟ್ವರ್ಕ್ ರೇಡಿಯೋ ಕೇಂದ್ರದಲ್ಲಿ ಪ್ರಸಾರವಾಗಿ ನಾರಾಯಣ್ ಕೊಂಡರವರು ಮೆಚುಗೆ ವ್ಯಕ್ತಪಡಿಸಿದರು. ಚಿತ್ರದ ಉತ್ತಮ ಪ್ರತಿಕ್ರಿಯೆಯ ನಂತರ ಫ್ರೆಂಚ್ ಭಾಷೆಗೆ ಡಬ್ ಆಗಿ ಫ್ರಾನ್ಸ್ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರವು ಫ್ರೆಂಚ್ ಭಾಷೆ ಡಬ್ ಆದ ಮೊದಲ ಕನ್ನಡ ಚಿತ್ರ.೨೨.೦೪.೨೦೧೬ ರಂದು ಲಾಸ್ಟ್ ಬಸ್ ಯಶಸ್ವಿಯಾಗಿ ಕೈಲಾಶ್ ಚಿತ್ರಮಂದಿರದಲ್ಲಿ ಮತ್ತು ಇತರ ಕೆಲವು ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರ್ಣಗೊಳಿಸಿತು. == ==